ಭಕ್ತಿ-ಶ್ರದ್ಧೆಯ ಸಂಗಮ: ನವರಾತ್ರಿಯ ದುರ್ಗಾ ಮಂಡಲ ಮಹಾಪೂಜೆಯಲ್ಲಿ ಭಾಗಿ
ವಿಜಯಪುರ ನಗರದ ನಿಂಬರಗಿ ಬಡಾವಣೆಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದ ಶ್ರೀ ದುರ್ಗಾ ಮಾತೆಯ ಮಹಾಪೂಜೆಯಲ್ಲಿ ಭಾಗವಹಿಸಿ, ಸಾಲಿಗ್ರಾಮ ಶಿಲಾಮಯ ಶ್ರೀ ವೆಂಕಟೇಶ್ವರ ಸ್ವಾಮಿ ಹಾಗೂ ದುರ್ಗಾ ಮಾತೆಯ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದೆ.
ಈ ಸಂದರ್ಭದಲ್ಲಿ ವ್ಯಾಸ-ಮಧ್ವ ಸಂಸ್ಕೃತ ವಿದ್ಯಾಲಯದ ಧರ್ಮದರ್ಶಿಗಳಾದ ಪಂಡಿತ ಶ್ರೀ ವೇದನಿಧಿ ಆಚಾರ್ಯ, ಬ್ರಾಹ್ಮಣ ಸಮಾಜದ ಹಿರಿಯರಾದ ಪಂಡಿತ ಶ್ರೀ ಮಧ್ವಾಚಾರ್ಯ ಮೊಕಾಶಿ, ಅಧ್ಯಕ್ಷರಾದ ಡಾ. ಉಪೇಂದ್ರ ನರಸಾಪುರ, ಶ್ರೀ ಆನಂದ ಜೋಶಿ, ಶ್ರೀ ಗಿರೀಶ ಅಕಮಂಚಿ, ಶ್ರೀ ರಾಘವೇಂದ್ರ ಪುರೋಹಿತ, ಶ್ರೀ ಎಂ.ಕೆ. ಜೋಶಿ, ಶ್ರೀ ತಡಸ್ ಸೇರಿದಂತೆ ವಿಪ್ರ ಸಮಾಜದ ಬಂಧುಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.
ದುರ್ಗಾ ಮಾತೆಯ ಕೃಪಾಶೀರ್ವಾದದಿಂದ ಸರ್ವರ ಬಾಳಿನಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಿ, ಲೋಕಕಲ್ಯಾಣವಾಗಲಿ ಎಂದು ಪ್ರಾರ್ಥಿಸುತ್ತೇನೆ.